18th June 2025

ಚಡಚಣ;ಲೋಕೋಪಯೋಗಿ ಇಲಾಖೆ ಉಪ-ವಿಭಾಗ ಇಂಡಿ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ,
ಚಡಚಣ ಹಾವಿನಾಳ ಹತ್ತಳ್ಳಿ ಲೋಣಿ ಬಿ.ಕೆ ಯಿಂದ ರಾಜ್ಯ ಹೆದ್ದಾರಿ ೪೧ಕ್ಕೆ ಕೂಡುವ ರಸ್ತೆ ಕಿ,ಮೀ ೨.೦೦ ರಿಂದ ೩.೦೦ ವರೆಗೆ ರಸ್ತೆ ಸುಧಾರಣೆಯ ಗುದ್ದಲಿ ಪೂಜೆಯನ್ನು ಶಾಸಕ ವಿಠ್ಠಲ ಕಟಕಧೋಂಡ ಅವರು ಮಂಗಳವಾರ ನೆರವೇರಿಸಿದರು.
ಹಾವಿನಾಳ ಹತ್ತಳ್ಳಿ ಲೋಣಿ, ಬಿಕೆ ಯಿಂದ ರಾಜ್ಯ ಹೆದ್ದಾರಿ೪೧ಕ್ಕೆ ಕೂಡುವ ರಸ್ತೆ ಒಟ್ಟು ೩೩.೦೦ ಕೀ.ಮಿ ಉದ್ದದ ಜಿಲ್ಲಾ ಮುಖ್ಯ ರಸ್ತೆ ಇದ್ದು ಪೂರ್ತಿ ಡಾಂಬರ ಮೇಲೆ ಹೊಂದಿದ ರಸ್ತೆಯಾಗಿರುತ್ತದೆ. ಸದರಿ ರಸ್ತೆಗಳು ಇಂಡಿ ಉಪ-ವಿಭಾಗದ ವ್ಯಾಪ್ತಿಯಲ್ಲಿ ಬರುತ್ತದೆ. ಹಾಗೂ ಸದರಿ ರಸ್ತೆಯು ಚಡಚಣ ಉಮರಾಣಿ ಯಿಂದ ಮಹಾರಾಷ್ಟ್ರ ಕೂಡುವ ರಸ್ತೆ ಇದ್ದು ಮತ್ತು ಗಡಿಯಲ್ಲಿ ಇರುವ ಎರಡು ರಾಜ್ಯದ ಜನರಿಗೆ ಓಡಾಡಲು ತುಂಬಾ ಅನುಕೂಲವಾಗಿರುತ್ತದೆ. ಸದರ ರಸ್ತೆಯ ಮೇಲೆ ವಾಹನ ಸಂಚಾರ ಹೆಚ್ಚಾಗಿ ಇರುವದರಿಂದ ಡಾಂಬರ ಹಾಳಾಗಿದ್ದು, ರಸ್ತೆ ಸಂಚಾರಕ್ಕೆ ತುಂಬಾ ತೊಂದರೆ ಆಗುತ್ತಿದೆ.
ಸದರಿ ರಸ್ತೆ ಸುಧಾರಣೆಗಾಗಿ ಲೆಕ್ಕ ಶಿರ್ಷಿಕ ೨೦೨೩-೨೪ನೇ ಸಾಲಿನ ೫೦೫೪- ಜಿ.ಮು.ರ ಅಪೆಂಡಿಕ್ಷ ಯೋಜನೆಯಡಿಯಲ್ಲಿ ರೂ. ೧೦೦.೦೦ ಲಕ್ಷಗಳಿಗೆ ಅನುದಾನ ಮಂಜುರಾಗಿದ್ದು, ಸದರಿ ರಸ್ತೆ ಕಿ.ಮೀ: ೨.೦೦ ರಿಂದ ೨.೯೮ ವರೆಗೆ ೫.೫೦ ಮೀ ಅಗಲದ ರಸ್ತೆಯನ್ನು ಕ್ರಸ್ಟ್ ಸುಧಾರಣೆ ಮಾಡುವದು ಅತಿ ಅವಶ್ಯವಿದ್ದುದರಿಂದ ಕೆಲಸ ಪ್ರಾರಂಭಿಸಲಾಗಿದೆ ಎಂದರು.
ಈ ಕೆಲಸದ ವಿವರ ಅಂದಾಜು ಮೊತ್ತ ರೂ ೧೦೦ ಲಕ್ಷ ಮಾಡಿದ್ದರು. ಟೆಂಡರಿಗಿಟ್ಟ ಮೊತ್ತ ರೂ ೯೫.೨೨ ಲಕ್ಷ ಆದರೆ ಗುತ್ತಿಗೆದಾರವಿಜಯಪುರದ ಕೆ.ಆರ್.ತುಪ್ಪದ ಅವರಿಗೆ ರೂ ೯೫.೫೧ ಲಕ್ಷ ಗುತ್ತಿಗೆ ಮೊತ್ತ.ನೀಡಿದ್ದು ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಈ ಸಂದರ್ಬದಲ್ಲಿ ಶಾಸಕರು ಹೇಳಿದರು.
ಸರಕಾರದ ಹಂತದಲ್ಲಿ ಕೆಲಸಕ್ಕೆ ಹಣ ಹಾಗೂ ಅನುಮೋದನೆ ಕೊಡಿಸುವ ಕೆಲಸ ನಮ್ಮದು ಆದರೇ ಕೆಲಸ ಸರಿಯಾಗಿದೆಯೊ ಇಲ್ಲವೋ ನೋಡುವದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಬಿಟ್ಟಿದ್ದು ಮತ್ತು ಅವರ ಜವಾಬ್ದಾರಿಯಾಗಿದೆ ಎಂದರು.
ಈ ಸಂಧರ್ಬದಲ್ಲಿ ಕಾರ್ಯಕರ್ತರು ಹಾಗೂ ಹಾವಿನಾಳ ಹತ್ತಳ್ಳಿ ಲೋಣಿ, ಬಿಕೆ ಗ್ರಾಮಸ್ಥರು ಇದ್ದರು.

ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆಲೆಸಿದ ರಾಷ್ಟ್ರಕವಿ ನಿವಾಸ "ಗಿಳಿವಿಂಡು "ಸಮಗ್ರ ಅಭಿವೃದ್ದಿಗಾಗಿ ಕೇರಳ - ಕರ್ನಾಟಕ ಮುಖ್ಯ ಮಂತ್ರಿಯವರಲ್ಲಿಗೆ ನಿಯೋಗ ಬೇಟಿಗೆ ನಿರ್ಧಾರ.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಬೃಹತ್ ಪಾದಯಾತ್ರೆ